ಅಮ್ಮನ ತೋಟ

ಅಮ್ಮನ ತೋಟ

ಅಮ್ಮನ ತೋಟ

ಹಳ್ಳಿ, ಹಳ್ಳಿ ಅಂದರೆ ಸುಂದರ. ಹಳ್ಳಿಯ ಜೀವನವೇ ಸೊಗಸು. ಸುಂದರ ಪರಿಸರ ಧನಕರುಗಳು, ಕುರಿ, ಕೋಳಿಗಳ ಸದ್ದು..... ಊರಿನವರೆಲ್ಲ ನಮ್ಮವರೇ ಅನ್ನೋ ಭಾವ. ನಮ್ಮ ಊರೇ ದೊಡ್ಡ ಕುಟುಂಬ ಅನ್ನೋ ಮನೋಭಾವ. ಹಳ್ಳಿಯಲ್ಲಿ ಬೆಳೆಯುವ ಪ್ರತಿಯೊಬ್ಬರಿಗೂ ಅನಿಸಿರಬಹುದು. ಹೀಗೆ ನಾನು ಕೂಡ ಒಂದು ಸುಂದರ ಹಳ್ಳಿಯಲ್ಲಿ ಬೆಳೆದು ಬಂದವನು. ನಮ್ಮ ಸೊಗಡು,ಸಂಸ್ಕೃತಿ,ಸಂಪ್ರದಾಯಗಳು ಇನ್ನೂ ಉಳಿದಿವೆ ಅಂದರೆ ಅದು ಹಳ್ಳಿಗಳಲ್ಲಿ ಮಾತ್ರ ನೋಡಲು ಸಾಧ್ಯ. ಹೀಗೆ ಹಳ್ಳಿಯಲ್ಲಿ ಬೆಳೆಯುವ ಸೊಪ್ಪು,ತರಕಾರಿಗಳು ನಾವೇ ಸಾಕಿದ ನಾಟಿ ಹಸುವಿನ ಹಾಲು,ತುಪ್ಪ,ಬೆಣ್ಣಿ ಎಲ್ಲವೂ ಸುಂದರ. ಆಗಿನ ಕಾಲದ ಊಟದಲ್ಲಿದ್ದ ಪೋಷಕಾಂಶ ಎಲ್ಲವೂ ಉತ್ತಮ. ಆದರೆ ತದನಂತರದ ತಂತ್ರಜ್ಞಾನ ಬೆಳವಣಿಗೆ, ವ್ಯಯವಸಾಯದಲ್ಲಿ ಅಳವಡಿಸುತ್ತಿರುವ ರಾಸಾಯನಿಕಗಳು ಬೇಗ ಬೆಳೆದು ಹಣ ಸಂಪಾದನೆ ಮಾಡುವ ಆಸೆ ಎಲ್ಲವೂ ಮನುಷ್ಯನ ಜೀವನದ ಮೇಲೆ ಅವನ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ, ಇದೆಲ್ಲ ಮನುಷ್ಯನಿಗೆ ತಿಳಿದಿದ್ದರು ಅಭಿವೃದ್ದಿಯ ನೆಪದಲ್ಲಿ ಜೀವನ ನಡೆಸುತ್ತಿದ್ದಾನೆ. ನಾವೆಲ್ಲ ಚಿಕ್ಕವಯಸ್ಸಿನಲ್ಲಿ ತಿನ್ನುತಿದ್ದ ಊಟದ ರುಚಿ ಈಗ ದೊರೆಯುವುದಿಲ್ಲ ನಾವೆಲ್ಲ ಹಳ್ಳಿಯಲ್ಲಿ ಬೆಳೆದವರು ಮಹತ್ತರವಾದದೇನನ್ನೋ ಸಾದಿಸುವ ಆಸೆ,ಕನಸುಗಳು ನಗರದತ್ತ ಮುಖ ಮಾಡುವಂತೆ ಮಾಡಿದವು. ಅಂದುಕೊಂಡಿದನ್ನು ಸಾದಿಸಿದ ನಂತರ ದುಡ್ಡು ತಾನಾಗಿಯೇ ಸಿಗುತ್ತದೆ ಎಲ್ಲವೂ ಇದ್ದಾಗ ಏನೋ ಒಂದು ಸೆಳೆತ ನಾನು ಬೆಳೆದ ಹಳ್ಳಿ, ನಮ್ಮ ಜಮೀನು,ಎಲ್ಲವೂ ಆಗಾಗ ನೆನಪಿಗೆ ಬಂದು ಬಾಲ್ಯದ ಕ್ಷಣಗಳು ಕಣ್ಣಮುಂದೆ ಹಾದು ಹೋಗುತ್ತವೆ.

ಮರಳಿ ಮಣ್ಣಿಗೆ ಎಂಬ ಮಾತಿನಂತೆ ಮತ್ತೆ ಮೊದಲಿನತರ ಹಳ್ಳಿಯ ಜೇವನ ಜೀವಿಸಬೇಕು ಅನ್ನೋ ಆಸೆ ಮತ್ತೆ ಹುಟ್ಟುತ್ತದೆ ಅದಕ್ಕಾಗಿ ನನ್ನ ಹಳ್ಳಿಯಲ್ಲಿ ನನ್ನ ತಾಯಿಯ ಹೆಸರಿನಲ್ಲಿ ತೋಟವನ್ನು ಮಾಡಿ ದೇಸಿ ಹಸುಗಳನ್ನು ತಂದು ಸಾಕಲು ಶುರು ಮಾಡಿದೆ. ಎಷ್ಟೇ ಕೆಲಸದ ಒತ್ತಡವಿದ್ದರು ವಾರದಲ್ಲಿ ಎರಡು ದಿನ ಅಲ್ಲಿ ಕಳೆಯುವ ಕ್ಷಣ ಮನಸ್ಸಿಗೆ ನೆಮ್ಮದಿ ನೀಡುತ್ತದೆ ನನ್ನ ತಾಯಿ ಇಲ್ಲ ಎನ್ನುವ ಕೊರಗನ್ನು ಮರೆಸುತ್ತಿದೆ. 4-5 ಹಸುಗಳಿಂದ ಶುರುವಾದ ಈ ಕನಸು ನೋಡನೋಡುತ್ತಿದ್ದಂತೆ ದೊಡ್ಡ ಮಟ್ಟಕ್ಕೆ ಬೆಳೆಯಿತು. ತಾಯಿಯ ಹಾಲಿನಷ್ಟೇ ಶ್ರೇಷ್ಟವಾದ ಈ ದೇಸೀ ಹಸುಗಳ ಹಾಲಿನಿಂದ ಮಾಡಿದ ಉತ್ತಮ ಗುಣಮಟ್ಟದ ಆರೋಗ್ಯಕರ ತುಪ್ಪವನ್ನು ನಿಮ್ಮೆಲ್ಲರಿಗೂ ತಲುಪಿಸುವ ಆಸೆಯಿಂದ ನನ್ನ ತಾಯಿಯ ಹೆಸರಿನಲ್ಲಿ ನಿಮ್ಮೆಲ್ಲರಿಗೂ ಅರ್ಪಿಸುತ್ತಿದ್ದೇನೆ

ಇಂತಿ ನಿಮ್ಮವ

ಇಂತಿ ನಿಮ್ಮವ

ಪ್ರೇಮ್

ಪ್ರೇಮ್

Order ammana Thotas a2 products today and embrace a healthier lifestyle.